ನೆನಹಿನ ಸುಖವ ನೋಟ

ವಿಕಿಸೋರ್ಸ್ದಿಂದ



Pages   (key to Page Status)   


ನೆನಹಿನ ಸುಖವ ನೋಟ ನುಂಗಿತ್ತು
ನೋಟದ ಸುಖವ ಕೂಟ ನುಂಗಿತ್ತು. ಕೂಟದ ಸುಖವ ಸಮರಸ ನುಂಗಿತ್ತು
ಸಮರಸದ ಸುಖವ ಪರವಶ ನುಂಗಿತ್ತು
ಪರವಶದ ಸುಖವ ಕೂಡಲಚೆನ್ನಸಂಗಯ್ಯ ತಾನೇ ಬಲ್ಲ.