ನೆಲ ನೀರು ಕಿಚ್ಚು ಗಾಳಿ ಬಯಲು ಕೂಡಿ ಆದ ಪಿಂಡವ ತಾನೆಂದೆಂಬ ಮಿಥ್ಯಾಚರ್ಮದೇಹಿಗಳನೇನೆಂಬೆನಯ್ಯ? ನೆಲನಲ್ಲದ ನೀರಲ್ಲದ ಕಿಚ್ಚಲ್ಲದ ಗಾಳಿಯಲ್ಲದ ಬಯಲಲ್ಲದ ಪ್ರಕೃತಿಯಲ್ಲದ ಪುರುಷನಲ್ಲದ ಮೇಲಣ ಶುದ್ಧಸ್ವಯವೆ ತಾನೆಂದು ತಿಳಿದಾತನಲ್ಲದೆ ಶರಣನಲ್ಲ ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.