Pages(key to [[Help:Page Status{{!}}Page Status]])
ನೆಲನಿಲ್ಲದ ಭೂಮಿಯಲ್ಲಿ ಒಂದು ತಲೆ ಹುಟ್ಟಿ ತಲೆ ಹಲವು ಮುಖವಾಗಿದೆ. ಅದರ ನೆಲೆಯ ಬಲ್ಲ ಹಿರಿಯರನಾರನು ಕಾಣೆ ನೋಡಾ. ಹಲವು ಮುಖ ಹಾವಾಡಿಗನ ನುಂಗಲು ನೆಲನೆತ್ತ ಹೋಯಿತ್ತೆಂದರಿಯೆನಯ್ಯ. ಹಾವಾಡಿಗ ದೇವಾಡಿಗನೊಳಗಡಗಲು ಹಾವೆತ್ತ ಹೋದವೋ ದೇವಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.