ಪಂಚಪ್ರಾಣವಾಯುಗಳ ಸಂಚಲಗುಣವನಳಿದಿರಬೇಕು. ಮುಂಚುವ ಕರಣಂಗಳ ವಂಚನೆಯನತಿಗಳೆದಿರಬೇಕು. ಚಿತ್ತವು ಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು. ಪ್ರಾಣ ಲಿಂಗದಲ್ಲಿ ಕೂಡಿ
ಲಿಂಗ ಪ್ರಾಣದಲ್ಲಿ ಕೂಡಿ
ಭಿನ್ನವಿಲ್ಲದೆ ಏಕಸಮರಸವಾಗಿರಬೇಕು. ಸುಖದುಃಖ ನಾಸ್ತಿಯಾಗಿರಬೇಕು. ಇಷ್ಟುಳ್ಳಾತನೆ ಪ್ರಾಣಲಿಂಗಿ. ಅದೆಂತೆಂದೊಡೆ : ``ವಾಯುಪ್ರಾಣಗುಣೇ ಲಿಂಗೇ ಲಿಂಗಪ್ರಾಣೇ ಸಮಾಹಿತಃ