ಪರಮಾರ್ಥದಲ್ಲಿ
ಪರೀಕ್ಷಿಸಿ
ತಿಳಿದು
ನೋಡುವಡೆ
ಗುರುವಾರೂ
ಇಲ್ಲ
ಚೋಳ
ತಪ್ಪಿಸಿ.
ಪರಮಾರ್ಥದಲ್ಲಿ
ಪರೀಕ್ಷಿಸಿ
ತಿಳಿದು
ನೋಡುವಡೆ
ಭಕ್ತರಾರೂ
ಇಲ್ಲ
ಬಸವಣ್ಣ
ತಪ್ಪಿಸಿ.
ಪರಮಾರ್ಥದಲ್ಲಿ
ಪರೀಕ್ಷಿಸಿ
ತಿಳಿದು
ನೋಡುವಡೆ
ನಿರ್ವಾಣಿಗಳಾರೂ
ಇಲ್ಲ
ಅಕ್ಕಗಳು
ತಪ್ಪಿಸಿ.
ಪರಮಾರ್ಥದಲ್ಲಿ
ಪರೀಕ್ಷಿಸಿ
ತಿಳಿದು
ನೋಡುವಡೆ
ಹಿರಿಯರಾರೂ
ಇಲ್ಲ
ಚೀಲಾಳ
ತಪ್ಪಿಸಿ.
ಪರಮಾರ್ಥದಲ್ಲಿ
ಪರೀಕ್ಷಿಸಿ
ತಿಳಿದು
ನೋಡುವಡೆ
ಗಂಭೀರರಾರೂ
ಇಲ್ಲ
ಅಜಗಣ್ಣ
ತಪ್ಪಿಸಿ.
ಇಂತೀ
ಐದು
ತೆರದನುವು
ಆರಿಗೂ
ಇಲ್ಲವೆಂದೆನಬೇಡ.
ಅವರ
ಕರುಣ
ಉಳ್ಳವರಿಗೆ
ಆ
ಮುಕ್ತಿಯುಂಟು.
ಆ
ಐವರ
ಕಾರುಣ್ಯದ
ಪ್ರಸಾದವ
ಕೊಂಡು
ನಾನು
ಬಯಲಾದೆನು
ಕಾಣಾ
ಗುಹೇಶ್ವರಾ.