ವಿಷಯಕ್ಕೆ ಹೋಗು

ಪರಶಿವನು ಗುರುಜಂಗಮರೂಪಿಂದ ನರರನುದ್ಧರಿಸಲೆಂದು

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಪರಶಿವನು ಗುರುಜಂಗಮರೂಪಿಂದ ನರರನುದ್ಧರಿಸಲೆಂದು ಸಜಾತೀಯವಾದ ಮನುಜಾಕಾರವ ಧರಿಸಿ ಧರೆಗವತರಿಸಿರ್ಪನಯ್ಯಾ. ಇದನರಿಯದ ಮಂದಮತಿಗಳು ಆ ಗುರುಜಂಗಮವನಾರಾಧಿಸಿ ಭಕ್ತರಾಗದೆ
ವಿಜಾತೀಯವಾದ ಕಲ್ಲು ಕಟ್ಟಿಗೆ ಮಣ್ಣು ಮುಂತಾಗಿ ಹೊರಗಿನ ಜಡಾಕಾರವೆ ದೈವವೆಂದಾರಾಧಿಸಿ
ಮೊರಡಿಯಿಂದೊಸರುವ ನೀರ ತೀರ್ಥವೆಂದು ಸೇವಿಸಿ ಭವಭಾರಿಗಳಾಗುತ್ತಿಪ್ಪರಯ್ಯಾ `ತೀರ್ಥೇ ದಾನೇ ಜಪೇ ಯಜ್ಞೇ ಕಾಷೆ*ೀ ಪಾಷಾಣಕೇ ಸದಾ ಶಿವಂ ಪಶ್ಯತಿ ಮೂಢಾತ್ಮಾ ಶಿವೇ ದೇಹೇ ಪ್ರತಿಷಿ*ತೇ ಎಂದುದಾಗಿ ನಮ್ಮ ಕೂಡಲಚೆನ್ನಸಂಗಯ್ಯನ ವಚನವನಾರಯ್ಯದೆ ಕೆಡುತಿಪ್ಪರಯ್ಯಾ.