ಪರಿಪೂರ್ಣವನೈದಿಪ್ಪನಾಗಿ ಜ್ಞಾನಿಯಲ್ಲ ಅಜ್ಞಾನಿಯಲ್ಲ ಶೂನ್ಯನಲ್ಲ ನಿಶ್ಯೂನ್ಯನಲ್ಲ ಉಭಯಾಚಾರ ತಾನೆಯಾಗಿ ಕೊಳುಕೊಡೆಯಿಲ್ಲ. ಸಾಕಾರದ ಸಂಬಂಧವನರಿಯ ನಿತ್ಯಮುಕ್ತ ನಿರವಯ ಉಭಯಾತ್ಮಕ ತಾನೆ ಕೂಡಲಚೆನ್ನಸಂಗಯ್ಯನೆಂದೆನ್ನ ಸುಯಿದಾನಿಯಯ್ಯಾ ಬಸವಣ್ಣನು.