ಪರುಷದ ಗಿರಿಯಲ್ಲಿ ಚಿಂತಾಮಣಿ ರತ್ನದ ಕಂಡೆನಯ್ಯ. ಅದು ಅನಂತಕೋಟಿ ಸೋಮಸೂರ್ಯರ ಬೆಳಗು ನೋಡ. ಅತಿಶಯದ ಬೆಳಗಿನ ಬೆಳಗಿನೊಳು ಆನಂದಸುಖದೊಳಗೋಲಾಡುತಿರ್ದೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.