ಪವನವೆ ಅಂಗವಾದ ಪ್ರಾಣಲಿಂಗಿಗೆ ಸುಮನವೆ ಹಸ್ತ. ಆ ಹಸ್ತಕ್ಕೆ ಆದಿಶಕ್ತಿ
ಆ ಶಕ್ತಿಗೆ ಜಂಗಮಲಿಂಗ
ಆ ಲಿಂಗಕ್ಕೆ ತ್ವಗಿಂದ್ರಿಯವೆ ಮುಖ
ಆ ಮುಖಕ್ಕೆ ಸ್ಪರ್ಶನಪದಾರ್ಥ; ಆ ಪದಾರ್ಥವನು ತ್ವಕ್ಕಿನಲ್ಲಿಹ ಜಂಗಮಲಿಂಗಕ್ಕೆ ಅನುಭಾವಭಕ್ತಿಯಿಂದರ್ಪಿಸಿ
ಆ ಸುಸ್ಪರ್ಶನ ಪ್ರಸಾದವನು ಪಡೆದು ಸುಖಿಸುವಾತನೆ ಪ್ರಾಣಲಿಂಗಿಯಯ್ಯಾ ಅಖಂಡೇಶ್ವರಾ.