ಬಣ್ಣದಚರ್ಮದ ಕೇಳಿರೋ ಹೆಣ್ಣಿನಂಗಸಂಗದಕೂಟಸುಖ

ವಿಕಿಸೋರ್ಸ್ದಿಂದ



Pages   (key to Page Status)   


ಬಣ್ಣದಚರ್ಮದ ಹೆಣ್ಣಿನಂಗಸಂಗದಕೂಟಸುಖ ಸವಿಯೆಂದು ಮನವೆಳಸುವ ಕಣ್ಣುಗೆಟ್ಟಣ್ಣಗಳು ನೀವು ಕೇಳಿರೋ ! ಶುನಿ ಎಲುವ ಕಡಿವಲ್ಲಿ ತನ್ನ ಬಾಯ ಲೋಳೆ ತನಗೆ ಸವಿದಟ್ಟುತಿಪ್ಪುದಲ್ಲದೆ
ಆ ಎಲುವಿನೊಳಗೇನು ಸಾರಸವಿಯುಂಟೆ ? ತನ್ನ ಊಧ್ರ್ವಬಿಂದು ಮಾಯಾವಶದಿಂದೆ ಅಧೋಗತಿಗಿಳಿದು ಮೂತ್ರನಾಳ ತಗುಲಿ ಕಿಂಚಿತ್‍ಸುಖ ಉಂಟಾಗುತಿಪ್ಪುದಲ್ಲದೆ ಆ ಹೆಣ್ಣಿನಿಂದೇನು ಸುಖವುಂಟೆ ? ಎಡ್ಡ ಪ್ರಾಣಿಗಳಿರಾ ! ಇಂತೀ ದೃಷ್ಟವ ತಿಳಿದು ಭೇದಿಸಿ ಕಾಣಲರಿಯದೆ ಹೇಸಿಕೆಯ ಕಿಸುಕುಳದ ಕೀವುತುಂಬಿ ಒಸರುವ ಹಸಿಯತೊಗಲಿನ ಹಳೆಯಗಾಯದಲ್ಲಿ ವಿಷಯಾತುರದಿಂದೆ ಬಿದ್ದು ಮತಿಮಸುಳಿಸಿ ಮುಂದುಗಾಣದೆ ಮುಳುಗಾಡುತಿಪ್ಪುದು ನೋಡಾ ಮೂಜಗವೆಲ್ಲ ಅಖಂಡೇಶ್ವರಾ.