ಬಾಳೆಯ ಎಲೆಯ ಮೇಲೆ ತುಪ್ಪವ ತೊಡೆದಂತೆ ಒಪ್ಪವಿಟ್ಟು ವಚನವ ನುಡಿದೆನಲ್ಲದೆ ನಡೆಯಲ್ಲಿ ಒಪ್ಪವಿಟ್ಟು ನಡೆಯಲಿಲ್ಲವಯ್ಯ ನಾನು. ನುಡಿಹೀನ ನಡೆತಪ್ಪುಗ ಜಡದೇಹಿ ಕಡುಪಾತಕಂಗೆ ಒಡೆಯ ಅಖಂಡೇಶ್ವರಲಿಂಗವು ಸ್ವಪ್ನದಲ್ಲಿ ಸುಳಿಯಲಿಲ್ಲವಯ್ಯ ಎನಗೆ.