ವಿಷಯಕ್ಕೆ ಹೋಗು

ಬ್ರಹ್ಮರಂಧ್ರವೆಂಬುದು ಉತ್ತರೋತ್ತರ ಕೇತಾರವಯ್ಯ.

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಬ್ರಹ್ಮರಂಧ್ರವೆಂಬುದು ಉತ್ತರೋತ್ತರ ಕೇತಾರವಯ್ಯ. ಭ್ರೂಮಧ್ಯವೆಂಬ ಶ್ರೀಶೈಲ; ಹೃದಯ ಕಮಲಕರ್ಣಿಕಾವಾಸವೆನಿಸುವ ಕಾಶಿ ಕಾಣಿಭೋ. ಬ್ರಹ್ಮರಂಧ್ರದಲ್ಲಿ ಗುರುಸ್ವಾಯತ; ಭ್ರೂಮಧ್ಯದಲ್ಲಿ ಲಿಂಗಸ್ವಾಯತ; ಹೃದಯಕಮಲಕರ್ಣಿಕಾವಾಸದಲ್ಲಿ ಪರಮ ಜಂಗಮಲಿಂಗಸ್ವಾಯತ. ಈ ಲಿಂಗಗಳು ಇದ್ದಲ್ಲಿಯೇ ಸಮಸ್ತ ಲಿಂಗಂಗಳಿರ್ಪವು. ಅಲ್ಲಿಯೇ ಸಮಸ್ತ ತೀರ್ಥಯಾತ್ರೆಗಳಿಪ್ಪವು. ಸಮಸ್ತ ಕ್ಷೇತ್ರಂಗಳು ಅಲ್ಲಿಯೇ ಇಪ್ಪವು. ಗತಿಪಥ ಮುಕ್ತಿಯೂ ಅಲ್ಲಿಯೇ ಇಪ್ಪವು. ಹೀಂಗೆ ತನ್ನ ಒಳಹೊರಗೆ ಭರಿತವಾಗಿಪ್ಪ ಲಿಂಗವ ತಾ ಕುರುಹನರಿಯದೆ
ಅನ್ಯಲಿಂಗದಲ್ಲಿ ವರವ ಹಡದೆನೆಂಬ ಕುನ್ನಿಗಳನೊಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.