ಭಕ್ತನಾದಡೆ ಲಿಂಗಸ್ಥಲವ ಮೆಟ್ಟಲಾಗದು ಶರಣನಾದಡೆ ಭಕ್ತಸ್ಥಲವ ಮೆಟ್ಟಲಾಗದು ಲಿಂಗೈಕ್ಯನಾದಡೆ ಪ್ರಸಾದಿಸ್ಥಲವ ಮೆಟ್ಟಲಾಗದು. ಈ ತ್ರಿವಿಧ ಸಾಹಿತ್ಯ ಮಹಾಬೆಳಗಿನ ಬೆಳಗು ಕೂಡಲಚೆನ್ನಸಂಗಮದೇವ