ವಿಷಯಕ್ಕೆ ಹೋಗು

ಭಕ್ತಾದ್ಯೆ ೈಕ್ಯಾಂತವಹ ಷಡಂಗಕ್ಕೆ

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಭಕ್ತಾದ್ಯೆ ೈಕ್ಯಾಂತವಹ ಷಡಂಗಕ್ಕೆ ಭಕ್ತನಂಗವೇ ಆದಿಯಾಗಿ ಆ ಭಕ್ತಂಗೆ ಪೃಥ್ವಿಯೆ ಅಂಗವಾಗಿ ಆ ಪೃಥ್ವಿಯ ಅಂಗವನುಳ್ಳ ಭಕ್ತನಲ್ಲಿಯೇ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ ಭಕ್ತನಂಗದಲ್ಲಿಯೇ ಆಚಾರಲಿಂಗಸ್ವಾಯತವಾಗಿ ಆ ಆಚಾರಲಿಂಗದಲ್ಲಿಯೇ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಆಚಾರಲಿಂಗವೇ ಸರ್ವಕಾರಣವಾಗಿ ಇಂತೀ ಷಡ್ವಿಧಲಿಂಗದಲ್ಲಿಯೇ ಬೆರಸಿ ಬೇರಿಲ್ಲದಿರಬಲ್ಲರೆ ಭಕ್ತನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.