ಭಕ್ತಿವಿಶೇಷವ ಮಾಡುವಡೆ ಹತ್ತು ಬೆರಳುಂಟು ಹಾಸಿ ದುಡಿವಡೆ ತನಗುಂಟು ತನ್ನ ಪ್ರಮಥರಿಗುಂಟು. ಮಾರಿತಂದೆಗಳಂತೆ ಎನಗೇಕಹುದಯ್ಯಾ ರತ್ನದ ಸಂಕಲೆಯನಿಕ್ಕಿ ಕಾಡಿಹ ಕೂಡಲಸಂಗಮದೇವ ಶಿವಧೋ ಶಿವಧೋ ! 325