ಭೂಮಿಯೊಳಗೆ ನಿಧಾನವಿದ್ದುದ ಅಂಜನವುಳ್ಳವರು ತೋರಿರಯ್ಯಾ. ಅಂಜಲುಬೇಡ ಕಂಡಾ ಮನದಲ್ಲಿ ಸಂದೇಹವ ಮಾಡದಿರಾ. ಜಂಗಮದೊಳಗೆ ಲಿಂಗಯ್ಯನಿದ್ದಾನೆಂದು ನಂಬುಗೆಯುಳ್ಳಡೆ ತೋರುವ ಕೂಡಲಸಂಗಯ್ಯ. 186