ಭೇರುಂಡನ ಪಕ್ಷಿಗೆ ದೇಹ

ವಿಕಿಸೋರ್ಸ್ದಿಂದ

Pages   (key to Page Status)   

ಭೇರುಂಡನ ಪಕ್ಷಿಗೆ ದೇಹ ಒಂದೆ
ತಲೆಯೆರಡರ ನಡುವೆ ಕನ್ನಡವ ಕಟ್ಟಿ ಒಂದು ತಲೆಯಲ್ಲಿ ಹಾಲನೆರೆದು ಒಂದು ತಲೆಯಲ್ಲಿ ವಿಷವನೆರೆದಡೆ ದೇಹವೊಂದೇ
ವಿಷ ಬಿಡುವುದೇ ಅಯ್ಯಾ ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ ನಾನು ಬೆಂದೆ ಕಾಣಾ
ಕೂಡಲಸಂಗಮದೇವಾ.