ರಕ್ಕಸಿಯ ಹೊಳಲಲ್ಲಿ ಒಂದು ಪಕ್ಷಿ ಹುಟ್ಟಿ ರಕ್ಕಸಿಯ ಕೊಂದುದ ಕಂಡೆನಯ್ಯ. ಹಿಕ್ಕೆಯ ಬಿಟ್ಟು ಹಕ್ಕೆಯ ಮೇದು ಅಖಂಡಿತನಾದುದು ಸೋಜಿಗ ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.