ರೂಪನರ್ಪಿತವ ಮಾಡಿದ ಬಳಿಕ ರುಚಿಯನರ್ಪಿತವ ಮಾಡಲೇಬೇಕು ರುಚಿಯನರ್ಪಿತವ ಮಾಡಿದ ಬಳಿಕ ಮುಟ್ಟಿದ ಕೈ ವ್ರತಗೇಡಿಯಾಗಲೇಬೇಕು. ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗೆ ನಮೋ ನಮೋ ಎಂಬೆ.