ರೂಪುವಿಕಾರಿಗಳಿಗಿನ್ನಾಗದಯ್ಯಾ ರುಚಿವಿಕಾರಿಗಳಿಗಿನ್ನಾಗದಯ್ಯಾ ವಚನದ ರಚನೆಯ ನುಡಿವವರಿಗೆ ಪ್ರಸಾದ ವೇದ್ಯವಾಗದಯ್ಯಾ ಈ ತ್ರಿವಿಧದ ಮೊದಲನರಿಯದ ಅಸಂಬಂಧಿಗಳಿಗೆ ಇನ್ನಾಗದಯ್ಯಾ ಕೂಡಲಚೆನ್ನಸಂಗಾ ನಿಮ್ಮ ಪ್ರಸಾದ.