ಲಲನೆಯರ ನಟನೆಯೆಂಬ ಕುಟಿಲಕ್ಕೆ ಸಿಕ್ಕಿ ಕೋಟಲೆಗೊಳದಿರ ಮರುಳು ಮಾನವ. ನಿಟಿಲತಟದಲ್ಲಿ ಮಠವ ಮಾಡಿಕೊಂಡು ನಿಶ್ಚಿಂತ ನಿರಾಳನಾಗಿರ. ಹುಸಿಯ ಮಾಯಾತಮಂಧಕೆ ದಿಟಪುಟದಿವಾಕರ ಎನ್ನೊಡೆಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ಕಾಣಿರೋ.