ಲಿಂಗ ಮುಟ್ಟದೆ ಮುಟ್ಟೆನಯ್ಯಾ ! ಅದು ಅನರ್ಪಿತ ಲಿಂಗಕ್ಕೆ ಮಾಡಲಿಲ್ಲಾಗಿ. ತಟ್ಟದೆ ಮುಟ್ಟದೆ ಮನಸೋಂಕದೆ ಅನುವಿನ ಅಂಗಕ್ಕೆ ಮಾಡಬೇಕು. ಕೊಟ್ಟು ಕೊಂಬ ಭೇದವ ಕೂಡಲಚೆನ್ನಸಂಗಯ್ಯನಲ್ಲಿ ಮಹಾಪ್ರಸಾದಿಯೆ ಬಲ್ಲ.