ಲಿಂಗ ಲಿಂಗವೆಂಬನ್ನಕ್ಕ ಜಂಗಮವಲ್ಲ ಪ್ರಸಾದ ಪ್ರಸಾದವೆಂಬನ್ನಕ್ಕ ಶರಣನಲ್ಲ ಗುರು ಲಿಂಗವೆಂಬುದಕ್ಕೆ ಅಂಗವಿಸಲಾರೆ ಕೂಡಲಚೆನ್ನಸಂಗಯ್ಯಾ.