ಲಿಂಗದ್ರೋಹಿಯನೆ ಗುರುವೆಂಬೆ, ಗುರುದ್ರೋಹಿಯನೆ

ವಿಕಿಸೋರ್ಸ್ದಿಂದ



Pages   (key to Page Status)   


ಲಿಂಗದ್ರೋಹಿಯನೆ ಗುರುವೆಂಬೆ
ಗುರುದ್ರೋಹಿಯನೆ ಶಿಷ್ಯನೆಂಬೆ. ಸಮಯದ್ರೋಹಿಯನೆ ಭಕ್ತನೆಂಬೆ
ಪ್ರಸಾದದ್ರೋಹಿಯನೆ ಮಾಹೇಶ್ವರನೆಂಬೆ. ಇದು ಕಾರಣ
ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಸರ್ವಾಂಗದ್ರೋಹಿಯ ಲಿಂಗೈಕ್ಯನೆಂದೆಂಬೆ