ಲಿಂಗವನು ಪುರಾತನರನು ಅನ್ಯರ ಮನೆಯೊಳಯಿಕೆ ಹೋಗಿ ಹೊಗಳುವರು ತಮ್ಮದೊಂದುದರ ಕಾರಣ. ಲಿಂಗವು ಪುರಾತನರು ಅಲ್ಲಿಗೆ ಬರಬಲ್ಲರೆ ? ಅನ್ಯವನೆ ಮರೆದು ನಿಮ್ಮ ನೆನೆವರ ಎನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಾ.