ಲಿಂಗಾಂಗಿಗಳಲ್ಲದವರ ಶರಣಸಂಗವಿಲ್ಲದವರ ಕಂಡಡೆ ನಾಚುವೆ. ಅವರ ನುಡಿ ಎನಗೆ ಸಮನಿಸದಯ್ಯಾ ಕೂಡಲಸಂಗಮದೇವಾ ನೀನು ಅಲ್ಲಿ ಇಲ್ಲದ ಕಾರಣ. 454