ವಿಷಯಕ್ಕೆ ಹೋಗು

ಲಿಂಗೋದಕ ಪಾದೋದಕ ಪ್ರಸಾದೋದಕವೆಂದು

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಲಿಂಗೋದಕ ಪಾದೋದಕ ಪ್ರಸಾದೋದಕವೆಂದು ತ್ರಿವಿಧ: ಲಿಂಗೋದಕವೆಂಬುದು ಶಿವಸಂಸ್ಕಾರದಿಂದಾದುದು
ಪಾದೋದಕವೆಂಬುದು ಲಿಂಗಕ್ಕೆ ಮಜ್ಜನಕ್ಕೆರೆದುದು
ಪ್ರಸಾದೋದಕವೆಂಬುದು ಲಿಂಗವಾರೋಗಿಸಿದ ಬಳಿಕ ಸಿತಾಳಂಗೊಟ್ಟುದು. ಲಿಂಗೋದಕದಲ್ಲಿ ಲಿಂಗಕ್ಕೆ ಪಾಕಪ್ರಯತ್ನ
ಮಜ್ಜನಕ್ಕೆರೆವುದು. ಪಾದೋದಕದಲ್ಲಿ ಮುಖಪಕ್ಷಾಲನವ ಮಾಡುವುದು
ಶಿರಸ್ಸಿನ ಮೇಲೆ ತಳಿದುಕೊಂಬುದು. ಪ್ರಸಾದೋದಕವನಾರೋಗಿಸುವುದು_ ಇಂತೀ ತ್ರಿವಿಧೋದಕ. ದಾಸೋಹ ಷಟ್‍ಪ್ರಕಾರ ವರ್ತಿಸುವುದು; ಭಕ್ತನಿಂದೆಯ ಮಾಡಲಾಗದು
ಆಚಾರನಿಂದೆಯ ಮಾಡಲಾಗದು. ಹುಸಿಯಿಲ್ಲದಿದ್ದಡೆ ಭಕ್ತನು_ ಇಂತಿದು ಭಕ್ತಸ್ಥಲ ಕೂಡಲಚೆನ್ನಸಂಗಮದೇವಾ