ಲೋಕದ ನಚ್ಚು ಮಚ್ಚೆಂಬ ಕಿಚ್ಚೆದ್ದು ಸುಡುತಿದೆ ನೋಡ. ನಿಶ್ಚಿಂತ ನಿರಾಳವೆಂಬ ನೀರನೆರೆಯಲು ಆ ಕಿಚ್ಚು ಕೆಡುವುದು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.