ವಾರವೇಳು ಕುಲ ಹದಿನೆಂಟು ಎಂಬರಯ್ಯಾ ಅದ ನಾವು ಅಲ್ಲವೆಂಬೆವು. ಇರುಳೊಂದು ವಾರ ಹಗಲೊಂದು ವಾರ ಭವಿಯೊಂದು ಕುಲ ಭಕ್ತನೊಂದು ಕುಲ ನಾವು ಬಲ್ಲುದು ಕಾಣಾ ಕೂಡಲಚೆನ್ನಸಂಗಮದೇವಾ