ವಾರಿ ಬಲಿದು ವಾರಿಶಿಲೆಯಾದಂತೆ ವಾರಿಶಿಲೆ ಕರಗಿ ಉದಕವಾದಂತೆ ನಿನ್ನ ವಿನೋದಕ್ಕೆ ನೀನೆ ಶರಣನಾದೆ. ನಿನ್ನ ವಿನೋದಕ್ಕೆ ನೀನೆ ಲಿಂಗವಾದೆ. ನಿನ್ನ ವಿನೋದ ನಿಂದಲ್ಲಿ ನೀನೆ ಶರಣ ಲಿಂಗವೆಂಬುಭಯವಳಿದು ನಿರಾಳ ನಿರ್ಮಾಯನಾಗಿ ನಿಶ್ಯಬ್ದಮಯನಾದೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.