ವಿಷಯರತಿಯುಳ್ಳವಂಗೆ ಈಶ್ವರರತಿಯಿನ್ನೆಲ್ಲಿಯದೋ? ಅಂಗವಿಕಾರವುಳ್ಳವರಿಗೆ ಲಿಂಗಾಂಗ ಸಂಬಂಧವಿನ್ನೆಲ್ಲಿಯದೋ ಅಯ್ಯ?. ಮಾಯಾಪಟಲ ಹರಿಯದ ಹಿರಿಯರಿಗೆ ಮಹದ ಮಾತೇಕೋ? ಸಂಸಾರಸಂಗಾನುಭಾವದ ದುಶ್ಚರಿತ್ರದೊಳಗಿಪ್ಪವರಿಗೆ ಲಿಂಗಾನುಭಾವದ ಮಾತೇಕೋ? ಬಿಡು ಬಿಡಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.