ಶಿವಕಳಶ ಗುರುಕಳಶವೆಂದು ಹೆಸರಿಟ್ಟುಕೊಂಡು ನುಡಿವಿರಿ. ಶಿವಕಳಶ ಗುರುಕಳಶವ ನೀವು ಬಲ್ಲರೆ ಹೇಳಿರೇ. ಶಿವಕಳಶವಲ್ಲ ಇದು ಕುಂಭಕಳಶ. ಓಂ ಧಾಮಂತೇ ಗೋತಮೋ ಆಪೋ ಬೃಹತೀ ಧಾಮಂತೇ ವಿಶ್ವಂ ಭುವನಮಧಿಶ್ರಿತಮಂತಃ ಸಮುದ್ರೇ ಹೃದ್ಯಂತರಾಯುಷಿ ! ಅಪಾಮನೀಕೇ ಸಮಿಧೇಯ ಅಭೃತಸ್ತಮಶ್ಯಾಮ ಮಧುಮಂತಂತ ಊರ್ಮಿಂ ಇದು ಕಾರಣ
ಕೂಡಲಚೆನ್ನಸಂಗಯ್ಯಾ ಶಿವಕಳಶ ಗುರುಕಳಶದ ಹೊಲಬ ನಮ್ಮ ಬಸವಣ್ಣ ಬಲ್ಲ.