ಶಿವಾಶ್ರಯದಲ್ಲಿ ಹುಟ್ಟಿ, ಭವಾಶ್ರಯವ

ವಿಕಿಸೋರ್ಸ್ದಿಂದ



Pages   (key to Page Status)   


ಶಿವಾಶ್ರಯದಲ್ಲಿ ಹುಟ್ಟಿ
ಭವಾಶ್ರಯವ ನೆನೆರ ಭಂಡರ ಮುಖವ ನೋಡೆ
ನೋಡೆ. ಶಿವಾಶ್ರಯವೆಂದರೆ
ಶ್ರೀ ಗುರುವಿನ ಕರಕರಮಲವೆಂಬ ಪರಿ; ಭವಾಶ್ರಯವೆಂದರೆ
ತನ್ನ ಹಿಂದಣ ತಾಯಿ ತಂದೆಗಳೆಂಬ ಪರಿ. ಇಂತು ಗುರುಕರಜಾತನಾಗಿ
ಗುರುಕುಮಾರನಾಗಿ
ನರರ ಹೆಸರ ಹೇಳುವ ನರಕಜೀವಿಯ ಎನಗೊಮ್ಮೆ ತೋರದಿರ. ತಾನು ಶುದ್ಧನಿರ್ಮಲನಾಗಿ ಮಲಸಂಬಂಧವ ಬೆರೆಸುವ ಮರುಳುಮಾನವನ ಪರಿಯ ನೋಡಾ. ಇಂತಪ್ಪ ಅಜ್ಞಾನಿಯ ಶಿಷ್ಯನೆಂದು ಕೈವಿಡಿಯಬಹುದೆ?. ಇಂತಿವರಿಬ್ಬರ ಗುರುಶಿಷ್ಯಸಂಬಂಧವ ಕಂಡು ನಾನು ಹೇಸಿದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.