ಸದ್ಭಕ್ತರೇ ಎನ್ನ ತಂದೆ ತಾಯಿಗಳಯ್ಯ. ಸದ್ಭಕ್ತರೇ ಎನ್ನ ಬಂಧು ಬಳಗವಯ್ಯ. ಸದ್ಭಕ್ತರೇ ತಮ್ಮ ಒಕ್ಕುಮಿಕ್ಕುದನಿಕ್ಕಿ ಸಲಹಿದರಾಗಿ ಅಖಂಡೇಶ್ವರಾ ನಾ ನಿಮ್ಮ ಕಡೆಯ ಬಾಗಿಲ ಕಾಯ್ವುದಕೆ ಯೋಗ್ಯನಾದೆನಯ್ಯ.