ಸಾಕಾರವಿಲ್ಲದ ಬಯಲು ನಿರಾಕಾರವಿಲ್ಲದ ಬಯಲು ಪ್ರವೃತ್ತಿಯಿಲ್ಲದ ಬಯಲು ನಿವೃತ್ತಿಯಿಲ್ಲದ ಬಯಲು ಅಖಂಡೇಶ್ವರನೆಂಬ ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.