ಸಿಂಹದ ಯೋಗ್ಯವೆ ಮೊಲೆವಾಲು

ವಿಕಿಸೋರ್ಸ್ದಿಂದ



Pages   (key to Page Status)   


ಸಿಂಹದ ಮೊಲೆವಾಲು ಸಿಂಹದ ಮರಿಗಲ್ಲದೆ
ಸೀಳು ನಾಯಿಗೆ ಯೋಗ್ಯವೆ ಅಯ್ಯ ? ಶಿವಪ್ರಸಾದದ ಒಲುಮೆ ಶಿವಶರಣರಿಗಲ್ಲದೆ ಉಳಿದ ಭವಭಾರಿಗಳಿಗೆ ಅಳವಡುವುದೆ ಅಯ್ಯ ಅಖಂಡೇಶ್ವರಾ ?