ಹಸಿವಾದಡುಂಬುದನು ಸತಿಯ ಸಂಭೋಗವನು ಆನಾಗಿ ನೀ ಮಾಡೆಂಬವರುಂಟೆ ಮಾಡುವುದು ಮಾಡುವುದು ಮನಮುಟ್ಟಿ ಮಾಡುವುದು ಮಾಡುವುದು ತನುಮುಟ್ಟಿ ತನುಮುಟ್ಟಿ ಮನಮುಟ್ಟದಿರ್ದಡೆ ಕೂಡಲಸಂಗಮದೇವನೇತರಲ್ಲಿಯೂ ಮೆಚ್ಚ. 182