ಹಸು ರತ್ನವ ನುಂಗಿ ಬ್ರಹ್ಮೇತಿಗೆ ಬಲವಾಯಿತ್ತೆ ಅಯ್ಯಾ ? ಹಸುವ ಕೊಲಬಾರದು ರತ್ನವ ಬಿಡಲಾರದು ಕೂಡಲಚೆನ್ನಸಂಗಯ್ಯನೆಂಬ ರತ್ನ ನೀ ಜಂಗಮದೊಳಗೆ ಸಿಲುಕಿದೆಯಾಗಿ.