ಹೂ ಕೊಯ್ಯಹೋದಡೆ ಹೂ ದೊರಕೊಳ್ಳದು. ಅಗ್ಘವಣಿಯ ತುಂಬುವಡೆ ಅಗ್ಘವಣಿ ತುಂಬದು. ಪೂಜಿಸ ಹೋದಡೆ ಪೂಜೆ ನೆಲೆಗೊಳ್ಳದು._ ಇದೇನು ಸೋಜಿಗವೊ ಅಯ್ಯಾ ! ಅರಿದು ಮರೆದವನಲ್ಲ ಬೆರಗು ಹಿಡಿದವನಲ್ಲ. ಗುಹೇಶ್ವರನೆಂಬ ಬುದ್ಧಿ ಇಂತುಟು.