ವಿಷಯಕ್ಕೆ ಹೋಗು

ಪುಟ:27-Ghuntigalalli.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭ ಘಂಟೆಗಳಲ್ಲಿ

೫೫

ನಿನಗೊಂದು ಅವಕಾಶ ಸಿಕ್ಕದೇ ಇದ್ರೆ ಪಶ್ಚಾತ್ತಾಪ ಪಟ್ಟದ್ದಕ್ಕೇನು ಸಾರ್ಧಕ ? ಅನುಭವವಿದ್ದೇನು ಆದ ಹಾಗಾಯ್ತು ? ನಿನಗಾ ಅವಕಾಶ ಕೊಡಬೇಕಾದ್ದು ಧರ್ಮ, ಕೊಡೋಕೆ ನಾನು ಸಿದ್ಧನಾಗಿದ್ದೇನೆ. ನನ್ನ ಹೆಂಡತಿಂತ ನಾನು ನಿನ್ನ ಅವರೆಲ್ಲರೆದುರಿಗೆ ಹೆಮ್ಮೆಯಿಂದ ನಿಲ್ಲಿಸೋ ಅಷ್ಟು ಭರವಸೆ ನಿನ್ನಲ್ಲಿಟ್ಟಿದ್ದೇನೆ"
ಶಶಿಗೆ ಪಳ್ಳನೆ ಕಣ್ಣಿನಲ್ಲಿ ನೀರು ಬಂತು, " ಆದರೆ ನನಗಾ ಭರವಸೆ ಇದೆಯೆಂತ...."
" ಇದೆಂತ ತೋರಿಸೋದು ನಿನ್ನ ಕೈಲೇ ಇದೆ.... ..ಅಗೋ ! ಅಗೋ ! ಮತ್ತೆ ಜಲವಳಯವೇನಾದರೂ ಆಗೋ ಹಾಗಿದ್ರೆ ನಾನು ಆಶ್ರಮ ಹುಡಕ್ಕೊಂಡು ಬರೋಕೆ ಹೋಗ್ತೇನೆ.” ಎಂದು ಗಿರೀಶನು ಶಶಿಯ ಕರೆಸಲು ಷರಾಯಿ ಜೇಬಿನಿಂದ ಕರವಸ್ತ್ರವನ್ನು ಹೊರಕ್ಕೆ ಳೆದುಕೊಂಡ. ಕರವಸ್ತ್ರದೊಡನೆ ನೋಟುಗಳ ಸಣ್ಣ ಕಟ್ಟೊಂದು ಹೊರಕ್ಕೆ ಬಿದ್ದಿತು. ಅದನ್ನು ಕೈಗೆತ್ತಿ ಕೊಂಡು " ಓಹೋ ! ಮರತೇ ಹೋಗಿದೆ.ಸ್ತ್ರೀಧನ ! > ಏವಾಹಮಹೋತ್ಸವ ಕಾಲದಲ್ಲಿ ವಧುವಿಗೆ ಹಿರಿಯರು ಆಶೀರ್ವಾದ ಮಾಡಿಕೊಟ್ಟಂತಹ ೪೮೦ ವರಹಾ' ಸದ್ಯಕ್ಕೆ ನೋಟುಗಳ ರೂವದಲ್ಲಿ ...” ಎಂದವಳ ಕೈಯಲ್ಲಿಟ್ಟ. ಶತಿಯ ಕಣ್ಣು ಗಳಲ್ಲಿ ಮೊದಲೇ ನೀರು ತುಂಬಿತ್ತು :ಗಿರೀಶನ ಈ ಹೊಸ ವಾಗೈಖರಿ ಯಿಂದ ಅವಳ ಪುಟ್ಟ ಬಾಯಿಯ ಸುತ್ತಲೂ ಕಿರುನಗೆಯು ಕುಣಿಯ ಲಾರಂಭಿಸಿತು. ಮಳೆ ಹಸಿ ಹಾಕುತ್ತಿದ್ದಾಗ ಬಿಸಿಲು ಬಂದಂತೆ ಆ ಕಿರುನಗೆಯು ಕಂಡಿತು.ಗಿರೀಶನು ಆ ಮನೋಹರ ದೃಶ್ಯವನ್ನು ನೋಡಿ “ ಎಷ್ಟು ಸುಂದರವಾಗಿ ಕಾಣುತ್ತಿ” ಎಂದ.
" ಈಗ ಕವಿಯಾಗಲಾರಂಭಿಸಿದರೇನು ?"
“ ನೀನೇ ನನ್ನ ಕವನವಲ್ಲವೇನು ?"
" ನಿನ್ನೆ ನಿಮ್ಮ ಮುಖನೋಡೋಕೆ ಅಸಹ್ಯ ಪಟ್ಟು ಕೊಂಡೋಳು ನಾನು ; ಅದನ್ನ ನೆನೆಸಿಕೊಂಡರೆ ಈಗ ನನಗೇ ನಾಚಿಕೆಯಾಗುತ್ತೆ”