ವಿಷಯಕ್ಕೆ ಹೋಗು

ಪುಟ:Banashankari.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ునా5ంకేరి QC3. ಬನಶಂಕರಿ ೧೦೩ ಅಲ್ಲಿ ರಾಮಶಾಸ್ತ್ರಿ ಸ್ನಾನದ ಮನೆಗೆ ಹೊರಟ್ಟು ನಿಂತಿದ್ದ. ಅಮ್ಮಿ ಬಟ್ಟೆಗಳನ್ನು ಅಲ್ಲೇ ಹಗ್ಗದ ಮೇಲಿರಿಸಿ, ಆತನ ಪಾದ ಮುಟ್ಟಿ ನಮಸ್ಕಾರ ಮಾಡಿದಳು. ಆ ಪ್ರಣಾಮವಾಗಲೀ ಮುಂದಿನ ಮಾತಾಗಲೀ ಆತನಿಗೆ ಅನಿರೀಕ್ಷಿತವಾಗಿರಲಿಲ್ಲ. ಗದ್ಗದ ಕಂಠದಿಂದ ಅಮ್ಮಿ ಅಂದಳು : "ನನ್ನಣ್ಣನ ಹಾಗೆ ನೀವು ನನ್ನನ್ನು ಕಾಪಾಡಿದ್ರಿ. ಇವತ್ತು ಹೊರಡ್ರೀನಿ. ಆಶೀರ್ವದಿ ಸ್ಟೇಕು." ರಾಮಶಾಸ್ತ್ರಿ ನಿರುತ್ತರನಾದ. ಅವನ ಕಣ್ಣುಗಳು ಮಂಜಾದುವು. ಆ ದೃಶ್ಯವನ್ನು ನೋಡುತ್ತ ಅಡುಗೆಮನೆಯಿಂದ ಹೊರಬಂದ ಸುಂದರಮ್ಮನ ಪಾದ ಮುಟ್ಟಲು ಅಮ್ಮಿ ಮುಂದಾದಳು. "ಇದೇನಾಡ್ರಿದೀಯಾ?" ಎಂದು ಪ್ರತಿಭಟಿಸಿದಳು ಸುಂದರಮ್ಮ, ಅಮ್ಮಿಯನ್ನು ಎರಡೂ ಕೈಗಳಿಂದೆತ್ತಿ ಆಕೆ ಎದೆಯ ಅವಚಿಕೊಂಡಳು ಅರವನ್ನು ಅಲ್ಲೇ ಬಿಟ್ಟು ರಾಮಶಾಸ್ತ್ರಿ ಸ್ನಾನದ ಮನೆಗೆ ಹೋದ ಪ್ರಯಾಸಪಡುತ್ತ ಅಮ್ಮಿ ಮಾತನಾಡಿದಳು: " ಅವರು ಬಾ ಅಂದಿದಾರೆ : ಹೊರಟ್ಟೋಗ್ರೀನಕ್ಕ.. ಹೀಗೆಯೇ ಇರೋದ್ಕಾಗುತ್ತಾ ? ಸಾಯೋದು ತಪ್ಚೂಂತ ಯಾವಾಗ್ಲೂ ನೀನು ಹೇಳ್ತೀದ್ದೆ. ಹಾಗಾದ್ರೆ ಬದುಕ್ಷೇಕು. ಬದು ಕ್ಬೇಕಾದ್ರೆ ಬೇರೆ ಹಾದೀನೇ ಇಲ್ಲ, ಒಳ್ಳೋದೊ ಕೆಟ್ಟದ್ದೊ, ಧರ್ಮವೊ ಅಧರ್ಮವೊ ನನಗೆ ಗೊತ್ತಿಲ್ಲ ಅಕ್ಕ, ಬಾ ಅಂತ ಕರೆದಿದಾರೆ. ಹೋಗ್ರೀನಿ-ಇಷ್ಟು ದಿವ್ನ ನಿನ್ನಿಂದಾಗಿ ಜೀವ ಹಿಡಿದಿದ್ದೆ ಅಕ್ಕ, ಈ ಋಣ ಈ ಜನ್ಮದಲ್ಲಿ ತೀರ್ಸೋಕಾಗಲ್ಲ.....ನನ್ನನ್ನು ಮರಿಬೇಡ ಅಕ್ಕ... ಆಗಾಗ್ಗೆ ಸಿಗ್ತಿರು ಅಕ್ಕ... ನನ್ನನ್ನು ಕ್ಷಮಿಸು ಅಕ್ಕ... "ನೀನು ಕ್ಷಮಿಸ್ಬೇಕಾದ್ದು ನಮ್ಮನ್ನ ತಾಯಿಾ," ಎಂದಳು ಸುಂದರಮ್ಮ.. "ತಪ್ಪು ಮಾಡಿರೋರು ನಾವು.. ಕಟ್ಟಳೆ ಶಾಸನ ಅಂತ ಬಡ್ಕೋತಾ ಇದೀವಲ್ಲ -ನಮ್ಮದು ತಪ್ಪು _ಆ ದಿನ ಅಮ್ಮಿಯ ಅಳಲಿನ ಒರತೆ ಒಣಗಲಿಲ್ಲ. ಹೊಸ ಅಧ್ಯಾಯನಕ್ಕೆ ಅದರ ಅಗ್ಯತೆವಿಲ್ಲವೆಂದೋ ಏನೋ, ಕಣ್ನಿರಿನ ಕಡಲನ್ನು ಅಲ್ಲೇ ಬತ್ತಿಸಿ ಹೋಗಲು ಆಕೆ ಸಿದ್ದವಾಗಿದ್ದಳು. ಹಗಲು ಹತ್ತು ಕೆಲಸಗಳ ನಡುವೆ ಸಮಯ ಕಳೆಯಲೆಂದು ಹತ್ತು ಮಾತುಗಳು ಹೊರಟುವು. " ಮೊನ್ನೆ ರಾತ್ರೆ ನೀವು ಮಾತಾಡೊಂಡಿದ್ದೆಲ್ಲಾ ಕೇಳಿಸ್ತು ಅಕ್ಕಾ-ನಂಗೆ ನಿದ್ದೆ బందిರ್ಲಿಲ್ಲ ? "ನಾನೂ ಹಾಗೇ ಅಂದೊಂಡೆ ಬನೂ...ಏನೋ ಮಾತಾಡಿದ್ವಿ, ಮನಸ್ನಲ್ಲಿ ಇಟ್ಕೋ ಬೇಡವಮ್ಮಾ..." "ಅಂಥಾದ್ದೇನೂ ನೀವು ಹೇಳಿಲ್ಲ ಅಕ್ಕ, ತಪ್ಪೇನಿತ್ತು ಅದರಲ್ಲಿ ?" "ಏನೋ ಗಾಬರಿಯಾಗಿ ಹಾಗೆ ಮಾತಾಡ್ವ." " ಆದರೆ ಒಂದು ವಿಷಯ ಅಕ್ಕ, ನಾನು ಎಳೇಮಗು ಆಗಿದ್ದಾಗ ಹ್ಯಾಗಿದ್ನೋ ಹಾಗೇ ಇದೀನಿ ಇನ್ನೊ,"