ಕುಲವನರಸುವರೆ ಇದರೊಳು ಛಲವನರಸುವರೆ ಹೊಲೆಗೇರಿಯಲೊಂದು ಎಲುವಿನ ಮನೆಗಟ್ಟಿ ತೊಗಲಹೊದಿಕೆ ನರವಿನ ಹಂಜರ ಕುಲವನರಸುವರೆ ? ಹೊಲತಿ ಹೊಲೆಯ[ನು] ಹೋಗಿ ಹೊಲೆಯಲ್ಲಿ ಮಿಂದಡೆ ಹೊಲೆ ಹೋಯಿ[ತ್ತಿ]ಲ್ಲ ಕುಲ ಹೋಗಲಿಲ್ಲ. ಕಂಬಳಿಯೊಳಗೆ ಕೂಳಕಟ್ಟಿ ಕೂದಲನರಸುವರೆ ಇಂಥ ಡಂಬಕರ ಕೂಡಲಸಂಗಮದೇವರು ಮೆಚ್ಚರಯ್ಯಾ.