ಮೂರರಲ್ಲಿ ಮುಟ್ಟಲಿಲ್ಲ ಆರರಲ್ಲಿ ತೋರಲಿಲ್ಲ. ಎಂಟರಲ್ಲಿ ಕಂಡುದಿಲ್ಲ ಒಂದರಲ್ಲಿ ನಿಂದುದಿಲ್ಲ. ಏನೆಂದೆಂಬೆ ? ಎಂತೆಂದೆಂಬೆ ? ಕಾಯದಲ್ಲಿ ಅಳಿದುದಿಲ್ಲ ಜೀವದಲ್ಲಿ ಉಳಿದುದಿಲ್ಲ ಗುಹೇಶ್ವರನೆಂಬ ಲಿಂಗವು ಶಬ್ದಕ್ಕೆ ಬಂದುದಿಲ್ಲ