ನೋಡು ಕುಳ್ಳಿರ್ದು ನೋಡಯ್ಯಾ

ವಿಕಿಸೋರ್ಸ್ದಿಂದ



Pages   (key to Page Status)   


ನೋಡು ನೋಡಯ್ಯಾ ಗಂಡನೆ
ಎನ್ನ ಕಂಗಳುಪ್ಪರಿಗೆಯ ಮೇಲೆ ಕುಳ್ಳಿರ್ದು ಸಕಲ ವಿಚಿತ್ರವ. ಆಡು ಆಡಯ್ಯಾ ಗಂಡನೆ
ಎನ್ನ ಮನದ ಕೊನೆಯಲ್ಲಿ ಮಹಾಜ್ಞಾನದುಯ್ಯಾಲೆಯ ಕಟ್ಟಿ. ಮನಬಂದ ಪರಿಯಲ್ಲಿ ಕೂಡು ಕೂಡಯ್ಯಾ ಗಂಡನೆ ಎನ್ನ ಸತ್ಕಲೆಗಳಿಂದ ಸವಿದೋರಿಸಿ ಅಖಂಡೇಶ್ವರಾ.