ನೋಡಲಿಲ್ಲದ ಬಯಲು ಸೂಡಲಿಲ್ಲದ ಬಯಲು ಕೂಡಲಿಲ್ಲದ ಬಯಲು ನಾಮವಿಲ್ಲದ ಬಯಲು ಸೀಮೆಯಿಲ್ಲದ ಬಯಲು ಕಾರ್ಯವಿಲ್ಲದ ಬಯಲು ಕಾರಣವಿಲ್ಲದ ಬಯಲು ಅಖಂಡೇಶ್ವರನೆಂಬ ಬಯಲಿನ ಬಯಲು ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.