ಕೈಯಲ್ಲಿ ಕುರುಹು ಬಾಯಲ್ಲಿ ಅರುಹ ನುಡಿವುತಿಪ್ಪ ಅಯ್ಯಗಳೆಲ್ಲ ಇರುಹಿನ ಮೂತ್ರದಲ್ಲಿ ಪ್ರಳಯವಾದರು ನೋಡಾ. ಬಳಿಕಿವರರುಹು ಬರುದೊರೆವೋಯಿತ್ತು. ಇವರ ಪ್ರಾಣಲಿಂಗಿ ಸಂಬಂಧಿಗಳೆಂತೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.