ಮೂರುಮಂಡಲ ತಿರುಗುವಲ್ಲಿ ಆರೂರವರು ಅಳುತ್ತಿರ್ಪರು ನೋಡಾ. ಬೇರೊಂದೂರವರು ಬಂದು ಮೂರುಮಂಡಲವನೊಂದುಮಾಡಿ ಆರೂರವರ ಆಳುವ ಮಾಣಿಸಿ ಬೇರೊಂದೂರ ಹೊಕ್ಕು ನೋಡಲು ಈ ಊರೊಳಗೆ ಸತ್ತವನಿವನಾರೋಯೆಂದು ನೋಡಿಯೆತ್ತಹೋಗಲು ಎಲ್ಲರೂ ಸತ್ತುದ ಕಂಡು ಬೆರಗಾದೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.