ಮೋಹನ ಮೊಲೆಯ ಮುದ್ದುಮೊಗದ ಭಾವಕಿಯರ ಲಲ್ಲೆನುಡಿಯೆಂಬ ನಯಗತ್ತಿ ಎಲ್ಲರ ಹೃದಯವ ಕೊರವುತ್ತಿದೆ ನೋಡಾ. ಇನ್ನೆಲ್ಲಿಯ ಅರುಹೋ ಶಿವ ಶಿವಾ ಬಲ್ಲತನ ಬರುದೊರೆ ಹೋಯಿತ್ತು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.