Pages(key to [[Help:Page Status{{!}}Page Status]])
ಸ್ವಾನುಭಾವ ವಿವೇಕ ಅಂತರ್ಗತವಾಗಿ ಜ್ಞಾನ ತಲೆದೋರಿತ್ತಯ್ಯ. ಆ ತಲೆಯೊಳಗೊಂದು ಚಿತ್ಪ್ರಾಣನ ಕಂಡೆನಯ್ಯ. ಅದೇ ಎನ್ನ ಪ್ರಾಣದೊಡೆಯನೆಂದರಿದು ಅಲ್ಲಿ ಸನುಮತ ಸಂಗಿಯಾಗಿ ಘನಸಮರಸವಾಗಿ ಮನ ಮಗ್ನನಾಗಿ ಸದಾ ಸನ್ನಹಿತನಾಗಿರ್ದೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.