ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರವನ್ನು ಅಳೆಯುವ ಕೈಯಂತ್ರ

ವಿಕಿಸೋರ್ಸ್ದಿಂದ

ಅಂತರವನ್ನು ಅಳೆಯುವ ಕೈಯಂತ್ರ

ಇದು ಅಂತರಗಳನ್ನು ಅಳೆಯುವುದಕ್ಕಾಗಿ ಉಪಯೋಗಿಸುವ ಚಿಕ್ಕ ದುರ್ಬೀನಿನಿಂದ ಕೂಡಿದ ಉಪಕರಣ (ಹ್ಯಾಂಡ್‍ಲೆವಲ್ಸ್). ಸಾಮಾನ್ಯವಾಗಿ 4"-6" ಉದ್ದವಿದ್ದು ಆಕಾರದಲ್ಲಿ ಕೊಳವೆಯಂತಿರುತ್ತದೆ.

ಕೊಳವೆಯ ಮೇಲೆ ಒಂದು ರಸಮಟ್ಟವಿದ್ದು, ರಸಗುಳ್ಳೆಯ ಓಡಾಟ ಕೊಳವೆಯಲ್ಲಿರುವ ಕನ್ನಡಿಯಲ್ಲಿ ಪ್ರತಿಬಿಂಬಿತವಾಗಿ ಯಾವ ವಸ್ತುವಿನ ಮಟ್ಟವನ್ನು ವೀಕ್ಷಿಸಲು ಪ್ರಯತ್ನಿಸುತ್ತೇವೆಯೋ ಆ ವಸ್ತುವಿಗೆ ನೇರವಾಗಿ ಗೋಚರವಾಗುವುದು. ಇದು ಗಾತ್ರದಲ್ಲಿ ಕಿರಿದಾಗಿದ್ದು ಬೇರೊಂದು ಆಶ್ರಯವಿಲ್ಲದಂತೆ ಕೈಯಲ್ಲಿ ಹಿಡಿದು ಉಪಯೋಗಿಸಲನುಕೂಲವಾಗಿದೆ. ಅಂತರದ ವ್ಯತ್ಯಾಸಗಳನ್ನು ಅತಿ ಶೀಘ್ರದಲ್ಲಿ ಕಂಡುಹಿಡಿಯಲು ಇದಕ್ಕಿಂತ ಸುಲಭವಾದ ಉಪಕರಣ ಮತ್ತಾವುದೂ ಇಲ್ಲ. ಇಂಥ ಉಪಕರಣಗಳಲ್ಲಿ ಅಬ್‍ನೇ ಕ್ಲಿನೋಮೀಟರ್ ಹೆಚ್ಚಿಗೆ ಜನಪ್ರಿಯವಾಗಿದೆ.     

(ಎಚ್.ಕೆ.ಪಿ.)